ಕರ್ನಾಟಕವನ್ನು ಮಾದರಿ ರಾಜ್ಯವಾಗಿ ಮುನ್ನಡೆಸೋಣ

ದಿಗ್ವಿಜಯ ಭಾರತ ಪಕ್ಷ – ನಿಷ್ಠೆ, ನೀತಿ, ನಿರ್ಮಲತೆಯ ಮೂಲಕ ಜನತೆಯ ಹಕ್ಕುಗಳಿಗೆ ಧ್ವನಿ

ಸರ್ವಾಂಗೀಣ ಅಭಿವೃದ್ಧಿಯೇ... ನಮ್ಮ ಧ್ಯೇಯ

ಸಹಭಾಗಿಯಾಗಿ
ಡಾ. ಅರವಿಂದ್ ರಾಜೀವ್, ದಿಗ್ವಿಜಯ ಭಾರತ ಪಕ್ಷದ ಸಂಸ್ಥಾಪಕ

ಆತ್ಮೀಯರೇ,

ಡಾ. ಅರವಿಂದ್ ರಾಜೀವ್
ದಿಗ್ವಿಜಯ ಭಾರತ ಪಕ್ಷದ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ, ದಿಗ್ವಿಜಯ ಭಾರತ ಪತ್ರಿಕೆಯ ಮುಖ್ಯ ಸಂಪಾದಕ, ಎಸಿಬಿ ನ್ಯೂಸ್ ಕರ್ನಾಟಕದ ಮುಖ್ಯ ಸಂಪಾದಕ

ನಾನು ಡಾ. ಅರವಿಂದ್ ರಾಜೀವ್, ದಿಗ್ವಿಜಯ ಭಾರತ ಪಕ್ಷದ ಸಂಸ್ಥಾಪಕ, ಮತ್ತು ರಾಷ್ಟ್ರೀಯ ಅಧ್ಯಕ್ಷ, ಹಾಗು ದಿಗ್ವಿಜಯ ಭಾರತ ಎಂಬ ಹೆಸರಿನ ಪತ್ರಿಕೆಯ ಮುಖ್ಯ ಸಂಪಾದಕನಾಗಿದ್ದು , ಎಸಿಬಿ ನ್ಯೂಸ್ ಕರ್ನಾಟಕ ಎಂಬ ನ್ಯೂಸ್ ಚಾನೆಲ್ ನ ಮುಖ್ಯ ಸಂಪಾದಕನಾಗಿದ್ದು ಸರ್ಕಾರಿ ಅಧಿಕಾರಿಗಳ, ಭ್ರಷ್ಟರ, ಭೂ ಗಳ್ಳರ ವಿರುದ್ಧದ ಧ್ವನಿಯಾಗಿರುತ್ತೇನೆ.

ದಿಗ್ವಿಜಯ ಭಾರತ ಪಕ್ಷ 2019 ರಂದು ಫೆಬ್ರವರಿ ತಿಂಗಳಿನಲ್ಲಿ ಕೇಂದ್ರ ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿರುತ್ತದೆ, ಕರ್ನಾಟಕ ರಾಜ್ಯದ ಪ್ರಾದೇಶಿಕ ಧ್ವನಿಯಾಗಿ ರಾಜ್ಯದ ಪ್ರಗತಿಗೆ ಶ್ರಮಿಸಲು ಮತ್ತು ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮುನ್ನಡೆಸಲು ಸ್ಥಾಪಿಸಿದಂತಹ ಪಕ್ಷವಾಗಿರುತ್ತದೆ, ಅತಿ ಮುಖ್ಯವಾಗಿ ರಾಜ್ಯದಲ್ಲಿ ಶಿಕ್ಷಣವನ್ನು ಮೇಲ್ದರ್ಜೆಗೆ ಏರಿಸಲು ಹಾಗೂ ಸರ್ಕಾರಿ ಶಾಲೆಗಳಲ್ಲಿ ಉನ್ನತ ಮಟ್ಟದ ವ್ಯಾಸಂಗ ಬಡ ಮತ್ತು ಮಧ್ಯಮ ವರ್ಗದ ಕುಟುಂಬದ ವಿಧ್ಯಾರ್ಥಿಗಳಿಗೆ ಉಚಿತವಾಗಿ 12 ನೆಯ ತರಗತಿಯವರೆಗೂ ದೊರಕಬೇಕೆಂಬ ಆಶಯ, ಅತ್ಯಂತ ವಿಶೇಷವಾದ ಪರಿಸ್ಥಿತಿಯಲ್ಲಿ ರಾಜ್ಯದ ಕುಗ್ರಾಮ ಪ್ರದೇಶಗಳ ಹೆಣ್ಣು ಮಕ್ಕಳು ಈಗಲೂ ಸಹ ತಿಂಗಳ ಮುಟ್ಟಿನ ಸಂದರ್ಭದಲ್ಲಿ ಉಪಯೋಗಿಸುವಂತೆ ಸ್ಯಾನಿಟರಿ ಪ್ಯಾಡ್ ಗಳನ್ನು ಜೀವನ ಪರ್ಯಂತ ಕೈಗೆಟುಕುವ ದರದಲ್ಲಿ ಅಂದರೆ (ಹತ್ತು ರೂಪಾಯಿಗಳಿಗೆ ಅಗತ್ಯಕ್ಕೆ ಬೇಕಾಗುವಷ್ಟು) ನೀಡುವ ಮಹತ್ವಾಕಾಂಕ್ಷಿ ಯೋಜನೆ, ಸ್ಯಾನಿಟರಿ ಪ್ಯಾಡ್ ಗಳನ್ನು ಗೃಹ ಉದ್ಯಮವಾಗಿ "ಸ್ತ್ರೀ ಸ್ವಾವಲಂಬಿ" ಉದ್ಯಮವಾಗಿ ನಡೆಸಲು ನೆರವು ನೀಡುವ ಮೂಲಕ ಒಂದು ಯಶಸ್ವಿ ಉದ್ಯಮವಾಗಿ ರಾಜ್ಯದಲ್ಲಿ ಶುಚಿ-ಸೌಖ್ಯ ಎಂಬ ಘೋಷ ವಾಕ್ಯದೊಂದಿಗೆ, ಹಾಗು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧ ಕಠಿಣ ಕ್ರಮ, ಪಶು ಸಂಗೋಪನೆ, ಕುರಿ-ಕೋಳಿ, ಹಂದಿ ಸಾಕಾಣಿಕೆ, ಕೆರೆಗಳ ಮರು ಸ್ಥಾಪನೆ, ಭ್ರಷ್ಟಾಚಾರದ ಕಡಿವಾಣ ಇನ್ನೂ ಹಲವು ಯೋಜನೆಗಳನ್ನು ಜಾರಿ ಗೊಳಿಸಲು ಮುಂದಾಗೇಬೇಕೆಂಬ ಮತ್ತು ರಾಜ್ಯದಲ್ಲಿ ಸಂಪೂರ್ಣ ಮದ್ಯ ಪಾನ ನಿಷೇದ ಜಾರಿಗೆ ತರುವ ನಿಟ್ಟಿನಿಂದ ಈಗಾಗಲೇ ಅಬಕಾರಿ ಇಲಾಖೆಯ ವಿರುದ್ಧ ಸುಮಾರು ಆರು ವರ್ಷಗಳ ಹಿಂದಿನಿಂದ ಹೋರಾಟ ನಡೆಸಿಕೊಂಡು ಬಂದಿದ್ದೇವೆ, ಇನ್ನು ಹಲವಾರು ಯೋಜನೆಗಳ ಮೂಲಕ ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ರೂಪಿಸಲು ಕನ್ನಡ ನಾಡಿನ ಸಮಸ್ತ ಜನತೆಯ, ಮತದಾರದ, ಆಶೀರ್ವಾದ ಅವಶ್ಯಕತೆಯಿದೆ, ಎಲ್ಲಕ್ಕಿಂತ ಮಿಗಿಲಾಗಿ ರಾಜ್ಯದ ವಿದ್ಯಾವಂತ ಯುವ ಸಮೂಹಕ್ಕೆ ರಾಜಕೀಯವಾಗಿ ಭಾಗವಹಿಸಲು ಸದವಕಾಶ ನೀಡಲು ಮುಂದಾಗಿದ್ದೇವೆ.

ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ, ನಗರಸಭೆ, ಪುರಸಭೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗಳಲ್ಲಿ ಸ್ಪರ್ಧಿಸಲು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮುಕ್ತ ಅವಕಾಶ ನೀಡಲು ಸೃಷ್ಟಿಯಾದಂತಹ ವೇದಿಕೆಯಾಗಿ ದಿಗ್ವಿಜಯ ಭಾರತ ಪಕ್ಷ ಸ್ಥಾಪಿಸಲಾಗಿದೆ.

ಮನ್ನಣೆ ದಾಖಲೆ ಡೌನ್‌ಲೋಡ್ ಮಾಡಿ

ನಮ್ಮ ಅಂತರಂಗ

ದಿಗ್ವಿಜಯ ಭಾರತ ಪಕ್ಷ ಸಭೆ

ನಮ್ಮ ಯಾತ್ರೆ: ಜನತೆಯ ಅಂಗಣ

ದಿಗ್ವಿಜಯ ಭಾರತ ಪಕ್ಷವು 2019 ರಲ್ಲಿ ಕೇಂದ್ರ ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿ, ಕರ್ನಾಟಕದ ಸಮಸ್ಯೆಗಳಿಗೆ ನೇರ ಪರಿಹಾರ ಕಂಡುಹಿಡಿಯುವ ಉದ್ದೇಶದಿಂದ ರಚಿಸಲ್ಪಟ್ಟಿತು. ನಮ್ಮ ಮೂಲಭೂತ ತತ್ವಗಳು ನೀತಿ, ನಿರ್ಮಲತೆ, ಸಮಾನತೆ ಮತ್ತು ಸೇವೆಯಾಗಿವೆ.

ನಮ್ಮ ಪಕ್ಷವು ರಾಜಕೀಯ ಸಂಪ್ರದಾಯಗಳನ್ನು ಬಿಟ್ಟು ಹೊಸ ದಾರಿಯನ್ನು ತೆರೆದುಕೊಂಡಿದೆ. ನಾವು ಜನರ ಜೊತೆ ಕೂತುಕೊಂಡು ಕೇಳುತ್ತೇವೆ, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಅವರ ಜೊತೆ ಪರಿಹಾರಗಳನ್ನು ರಚಿಸುತ್ತೇವೆ.

ನಮ್ಮ ಸದಸ್ಯರು ಸಮಾಜದ ಎಲ್ಲ ವರ್ಗಗಳಿಂದ ಬಂದಿದ್ದಾರೆ - ಕೃಷಿಕರು, ಕೆಲಸಗಾರರು, ಶಿಕ್ಷಕರು, ವೈದ್ಯರು, ಯುವಕರು ಮತ್ತು ವೃದ್ಧರು. ನಮ್ಮ ಪಕ್ಷವು ಕೇವಲ ಒಂದು ವರ್ಗಕ್ಕೆ ಮಾತ್ರ ಸೇವೆ ಸಲ್ಲಿಸುವುದಿಲ್ಲ, ಆದರೆ ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ನೀಡುತ್ತದೆ.

ಸಮಾಜ ಸೇವೆ

ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ಖಾತ್ರಿಪಡಿಸುವುದು ನಮ್ಮ ಮುಖ್ಯ ಗುರಿ.

ಆಧುನಿಕ ದೃಷ್ಟಿ

ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುತ್ತೇವೆ.

ಪಾರದರ್ಶಕತೆ

ನಮ್ಮ ಸಮಸ್ತ ಕಾರ್ಯಗಳು ಪಾರದರ್ಶಕವಾಗಿರುತ್ತವೆ ಮತ್ತು ಜನರಿಗೆ ತಿಳಿಸಲ್ಪಡುತ್ತವೆ.

ನಮ್ಮ ದೃಷ್ಟಿ

2030 ರ ಹೊತ್ತಿಗೆ, ಕರ್ನಾಟಕವು ಶಿಕ್ಷಣ, ಸ್ವಚ್ಛತೆ, ಮಹಿಳಾ ಸಶಕ್ತೀಕರಣ, ಭ್ರಷ್ಟಾಚಾರ ವಿರುದ್ಧ ಹೋರಾಟ ಮತ್ತು ಮದ್ಯ ನಿಷೇದದ ಮೂಲಕ ಭಾರತದ ಮಾದರಿ ರಾಜ್ಯವಾಗಿರುತ್ತದೆ.

ಶಿಕ್ಷಣ

ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವುದು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ. 12ನೇ ತರಗತಿವರೆಗೆ ಉಚಿತ ವಿದ್ಯಾಭ್ಯಾಸ.

ಸ್ವಚ್ಛತೆ & ಸೌಖ್ಯ

ಹೆಣ್ಣು ಮಕ್ಕಳಿಗೆ ₹10 ದರದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡುವುದು. ಸ್ತ್ರೀ ಸ್ವಾವಲಂಬಿ ಉದ್ಯಮಗಳನ್ನು ಪ್ರೋತ್ಸಾಹಿಸುವುದು.

ಮದ್ಯ ನಿಷೇಧ

ಕರ್ನಾಟಕದಲ್ಲಿ ಸಂಪೂರ್ಣ ಮದ್ಯ ಪಾನ ನಿಷೇದ, ಅಬಕಾರಿ ಇಲಾಖೆಯ ಭ್ರಷ್ಟಾಚಾರಕ್ಕೆ ವಿರುದ್ಧ ಹೋರಾಟ.

ಪಶು ಸಂಗೋಪನೆ

ಕುರಿ, ಕೋಳಿ, ಹಂದಿ ಸಾಕಾಣಿಕೆ ಮತ್ತು ಕೆರೆಗಳ ಮರುಸ್ಥಾಪನೆಯ ಮೂಲಕ ಗ್ರಾಮೀಣ ಆರ್ಥಿಕ ಪುನರುಜ್ಜೀವನ.

ಭ್ರಷ್ಟಾಚಾರ ವಿರುದ್ಧ

ಸರ್ಕಾರಿ ಅಧಿಕಾರಿಗಳ, ಭೂಗಳ್ಳರ, ಭ್ರಷ್ಟ ಅಧಿಕಾರಿಗಳ ವಿರುದ್ಧ ನ್ಯಾಯಬದ್ಧ ಹೋರಾಟ.

ಯುವ ಸಶಕ್ತೀಕರಣ

ವಿದ್ಯಾವಂತ ಯುವಕರಿಗೆ ರಾಜಕೀಯ ಪ್ರವೇಶ, ನಾಯಕತ್ವ ತರಬೇತಿ ಮತ್ತು ಸಾರ್ವಜನಿಕ ಸೇವೆಗೆ ಪ್ರೋತ್ಸಾಹ.

ನಮ್ಮ ಸಂಸ್ಥೆಯ ರಚನೆ

ಪಕ್ಷದ ಮುಖ್ಯ ವ್ಯಕ್ತಿಗಳು ಮತ್ತು ನಾಯಕರು

ಡಾ. ಅರವಿಂದ್ ರಾಜೀವ್

ಡಾ. ಅರವಿಂದ್ ರಾಜೀವ್

ಸಂಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ

ಪಕ್ಷದ ಸಂಸ್ಥಾಪಕ ಮತ್ತು ದಿಗ್ವಿಜಯ ಭಾರತ ಪತ್ರಿಕೆಯ ಮುಖ್ಯ ಸಂಪಾದಕ.

ಪ್ರಧಾನ ಕಾರ್ಯದರ್ಶಿಗಳು

ಶ್ರೀ ಮಂಜು. ಎಲ್.

ಪ್ರಧಾನ ಕಾರ್ಯದರ್ಶಿಗಳು

ಸಾಮಾಜಿಕ ಕಾರ್ಯಕರ್ತ

ಕೋಶಾಧಿಕಾರಿ

ಶ್ರೀ ಶಿವಮೂರ್ತಿ ಎಸ್

ಕೋಶಾಧಿಕಾರಿ

ಸಾಮಾಜಿಕ ಕಾರ್ಯಕರ್ತ ಮತ್ತು ಶಿಕ್ಷಣ ಸಂಸ್ಥೆಯ ಸ್ಥಾಪಕ.

ರಾಷ್ಟ್ರೀಯ ಕಾರ್ಯಾಧ್ಯಕ್ಷರು

ಶ್ರೀ ರಘು ಬಿ

ಕಾರ್ಯಾಧ್ಯಕ್ಷರು

ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ವಲಯದ ತಜ್ಞ. ಕೃಷಿಕರ ಹಿತಾಸಕ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ನಮ್ಮ ಕಾರ್ಯಕ್ರಮಗಳು

ಕೃಷಿ ಕಾರ್ಯಕ್ರಮ

ಕೃಷಿ ಸಹಾಯ

ಕೃಷಿಕರಿಗೆ ಆಧುನಿಕ ತಂತ್ರಜ್ಞಾನ, ಸಾಲ, ಮತ್ತು ಮಾರುಕಟ್ಟೆ ಪ್ರವೇಶವನ್ನು ನೀಡುವುದು. ಕೃಷಿ ವೃದ್ಧಿಯನ್ನು 40% ಗೆ ಹೆಚ್ಚಿಸುವುದು.

ವಿವರಗಳು
ಯುವಕರ ಕಾರ್ಯಕ್ರಮ

ಯುವಕರ ಅಭಿವೃದ್ಧಿ

ಯುವಕರಿಗೆ ತಾಂತ್ರಿಕ ಶಿಕ್ಷಣ, ಉದ್ಯಮಶೀಲತೆ, ಮತ್ತು ಉದ್ಯೋಗ ಅವಕಾಶಗಳನ್ನು ನೀಡುವುದು. ಯುವ ಉದ್ಯಮಗಳಿಗೆ ಪ್ರೋತ್ಸಾಹ.

ವಿವರಗಳು
ಸ್ತ್ರೀ ಸಶಕ್ತೀಕರಣ

ಸ್ತ್ರೀ ಸಶಕ್ತೀಕರಣ

ಸ್ತ್ರೀಯರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಶಕ್ತೀಕರಣವನ್ನು ನೀಡುವುದು. ಮಹಿಳಾ ಸಹಕಾರ ಸಂಘಗಳನ್ನು ಪ್ರೋತ್ಸಾಹಿಸುವುದು.

ವಿವರಗಳು

ಜನರ ಮಾತು

"ಪ್ರಜಾಸತ್ತಾತ್ಮಕ ಪಕ್ಷವು ನಮ್ಮ ಗ್ರಾಮದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದೆ. ನಮ್ಮ ಕುಟುಂಬಕ್ಕೆ ಇದು ಜೀವನವನ್ನು ಬದಲಾಯಿಸಿದೆ!"

ರಾಮೇಶ್

ರಾಮೇಶ್

ಕೃಷಿಕ, ಹುಬ್ಬಳ್ಳಿ

"ನನ್ನ ಮಗಳಿಗೆ ಶಿಕ್ಷಣಕ್ಕಾಗಿ ಸಾಲ ನೀಡಲಾಯಿತು. ಈಗ ಅವಳು ವೈದ್ಯಕೀಯ ವಿದ್ಯಾರ್ಥಿನಿ. ನಾವು ಪಕ್ಷದ ಮೇಲೆ ಗೌರವ ವಹಿಸುತ್ತೇವೆ."

ಶ್ರೀಮತಿ. ಕೃಷ್ಣಾ

ಶ್ರೀಮತಿ. ಕೃಷ್ಣಾ

ಮನೆಗೆ ಮನೆಗೆ ಸೇವೆ, ಬೆಂಗಳೂರು

"ನಮ್ಮ ಪಕ್ಷದ ಪಾರದರ್ಶಕತೆ ನನಗೆ ಸಂತೋಷವನ್ನು ಕೊಟ್ಟಿದೆ. ನಾವು ಏನು ಮಾಡುತ್ತೇವೆ, ಏನು ಖರ್ಚು ಮಾಡುತ್ತೇವೆ ಎಂಬುದು ತಿಳಿದಿದೆ!"

ವಿಜಯ್

ವಿಜಯ್

ಸಾಮಾಜಿಕ ಕಾರ್ಯಕರ್ತ, ಮೈಸೂರು

ಸಂಪರ್ಕ

ಸಂಪರ್ಕಿಸಿ

ಕಛೇರಿ ವಿಳಾಸ

ದಿಗ್ವಿಜಯ ಭಾರತ ಪಕ್ಷ #5(40/G), ಸ್ಟ್ಯಾಂಡರ್ಡ್ ಇಂಗ್ಲೀಷ್ ಸ್ಕೂಲ್ ಬಿಲ್ಡಿಂಗ್, 21ನೇ ಮುಖ್ಯ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560 040.

ಫೋನ್

+91 99644 63887

ಇಮೇಲ್

DIGVIJAYABHARATHA@GMAIL.COM

ಕಾರ್ಯನಿರ್ವಹಣಾ ಸಮಯ

ಸೋಮವಾರ - ಶನಿವಾರ: 9:00 AM - 6:00 PM